ಹವ್ಯಾಸಗಳು

ಚಾರಣ, ಸಿನಿಮಾ ಮತ್ತು ಮಹಾಭಾರತ ಇವರ ಆಸಕ್ತಿಯ ಕ್ಷೇತ್ರಗಳು.

ಚಾರಣದಲ್ಲಿ ಆಸಕ್ತಿಯಿರುವ ಇವರು ನಮ್ಮ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಹಲವು ಬೆಟ್ಟಗಳನ್ನೂ ಮತ್ತು ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನು ಹತ್ತಿದ್ದಾರೆ. ಪ್ರತಿ ನಿತ್ಯ ಸ್ಕ್ವಾಷ್ ಆಡುತ್ತಾರೆ. ಪ್ರಪಂಚದ ಒಳ್ಳೆಯ ಚಿತ್ರಗಳನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾರೆ. ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾರೆ. ವ್ಯಾಸಭಾರತದ ಅಧ್ಯಯನವನ್ನು ಇವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾರೆ.